Karnataka Govt Holiday List 2025 - Summary
ಕರ್ನಾಟಕ ಸರ್ಕಾರ 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2025ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ನಾನಾ ಹಬ್ಬಗಳು ಸೇರಿದಂತೆ 2025ರಲ್ಲಿ ಒಟ್ಟು 19 ದಿನ ರಜೆ ಘೋಷಿಸಲಾಗಿದೆ. ಇನ್ನು ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚಿನ ರಜೆಗಳಿವೆ.
ಭಾನುವಾರಗಳಂದು ಗಣರಾಜ್ಯೋತ್ಸವ(ಜ.26), ಯುಗಾದಿ(ಮಾ.30), ಮೊಹರಂ ಕಡೆ ದಿನ(ಜು.6), ಮಹಾಲಯ ಅಮವಾಸ್ಯೆ(ಸೆ.21) ಮತ್ತು ಎರಡನೇ ಶನಿವಾರದಂದು ಕನಕದಾಸ ಜಯಂತಿ(ನ.8) ಬರುತ್ತವೆ. ಹಾಗಾಗಿ, ಆ ರಜೆಗಳ ಬಗ್ಗೆ ಈ ಪಟ್ಟಿಯಲ್ಲಿ ನಮೂದಿಸಿಲ್ಲ.
Karnataka Government Holiday List 2025
ದಿನಾಂಕ | ವಾರ | ಸಾರ್ವತ್ರಿಕ ರಜಾದಿನ |
ಜ.14 | ಮಂಗಳವಾರ | ಮಕರ ಸಂಕ್ರಾಂತಿ |
ಫೆ. 26 | ಬುಧವಾರ | ಮಹಾಶಿವರಾತ್ರಿ |
ಮಾ.31 | ಸೋಮವಾರ | ರಂಜಾನ್ |
ಏ.10 | ಗುರುವಾರ | ಮಹಾವೀರ ಜಯಂತಿ |
ಏ.14 | ಸೋಮವಾರ | ಡಾ.ಬಿಆರ್ ಅಂಬೇಡ್ಕರ್ ಜಯಂತಿ |
ಏ.18 | ಶುಕ್ರವಾರ | ಗುಡ್‌ಫ್ರೈಡೇ |
ಏ.30 | ಬುಧವಾರ | ಬಸವ ಜಯಂತಿ, ಅಕ್ಷತ ತೃತೀಯ |
ಮೇ.1 | ಗುರುವಾರ | ಕಾರ್ಮಿಕರ ದಿನಾಚರಣೆ |
ಜೂ.7 | ಶನಿವಾರ | ಬಕ್ರೀದ್ |
ಆ. 15 | ಶುಕ್ರವಾರ | ಸ್ವಾತಂತ್ರ್ಯ ದಿನಾಚರಣೆ |
ಆ.27 | ಬುಧವಾರ | ವರಸಿದ್ದಿ ವಿನಾಯಕ ವ್ರತ |
ಸೆ. 5 | ಶುಕ್ರವಾರ | ಈದ್‌ಮಿಲಾದ್ |
ಅ.1 | ಬುಧವಾರ | ಮಹಾನವಮಿ, ಆಯುಧಪೂಜೆ, ವಿಜಯದಶಮಿ |
ಅ.2 | ಗುರುವಾರ | ಗಾಂಧಿ ಜಯಂತಿ |
ಅ. 7 | ಮಂಗಳವಾರ | ಮಹರ್ಷಿ ವಾಲ್ಮೀಕಿ ಜಯಂತಿ |
ಅ.20 | ಸೋಮವಾರ | ನರಕ ಚತುದರ್ಶಿ |
ಅ.22 | ಬುಧವಾರ | ಬಲಿಪಾಡ್ಯಮಿ, ದೀಪಾವಳಿ |
ನ.1 | ಶನಿವಾರ | ಕನ್ನಡ ರಾಜ್ಯೋತ್ಸವ |
ಡಿ. 25 | ಗುರುವಾರ | ಕ್ರಿಸ್‌ಮಸ್ |