Tulasi Pooja Vidhanam Kannada
Tulasi Pooja Vidhanam Kannada PDF read online or download for free from the official website link given at the bottom of this article.
ಆಷಾಢದಲ್ಲಿ ಶಯನೀ ಏಕಾದಶಿಯಂದು ಲೋಕ ವಿಡಂಬನೆಗಾಗಿ ಶಯನಿಸಿರುವ ಶ್ರೀ ವಿಷ್ಣುವು ಕಾರ್ತೀಕ ಶುದ್ಧ ದ್ವಾದಶಿಯಂದು – ಪ್ರಭೋಧಿನಿಯಂದು ಏಳುವುದರಿಂದ ಇದನ್ನು ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ. ತುಲಸೀ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು ರೂಢಿಯಲ್ಲಿದೆ.
ಅನುಕೂಲವಿದ್ದರೆ ಧಾತ್ರಿ ವೃಕ್ಷದ ಮುಂದೆ ತುಳಸಿ ಸಸಿಯನ್ನಿಟ್ಟು ಪೂಜಿಸಬೇಕು. ಇಲ್ಲದಿದ್ದರೆ ತುಳಸೀ ವೃಂದಾವನದ ಹತ್ತಿರ / ಧಾತ್ರೀ ವೃಕ್ಷದ ಕೊಂಬೆಯನ್ನಿಟ್ಟು ಅದರ ಮುಂದ ಶ್ರಿಕೃಷ್ಣನ ಪ್ರತಿಮೆ ಮತ್ತು /ಅಥವಾ ಸಾಲಿಗ್ರಾಮಗಳನ್ನಿಟ್ಟು ಪೂಜೆ ಮಾಡತಕ್ಕದ್ದು. ತುಳಸಿ ಕಟ್ಟೆಗೆ ಬಣ್ಣವನ್ನು ಹಚ್ಚಿ, ರಂಗೋಲಿ ಹಾಕಿ, ಅಲಂಕಾರ ಮಾಡಬೇಕು.
Tulasi Pooja Vidhanam Kannada
ದೇವರ ಪೂಜೆಯ ನಂತರ ತುಳಸೀ ಪೂಜೆಯನ್ನು ಮಾಡಬೇಕು. ನೈವೇದ್ಯ ಮಾಡುವಾಗ ದೇವರಿಗೆ ನೈವೇದ್ಯ ಮಾಡಿ, ಮಹಾಲಕ್ಷ್ಮಿಗೆ ನೈವೇದ್ಯ ಮಾಡಿ, ಪ್ರಾಣದೇವರಿಗೆ ನೈವೇದ್ಯ ಮಾಡಿ ನಂತರ ತುಳಸಿಗೆ ನೈವೇದ್ಯ ಮಾಡಬೇಕು. ಯಥಾಶಕ್ತಿ ಭಕ್ಷ್ಯ, ಭೋಜ್ಯ ತಯಾರಿಸಿ ಸಮರ್ಪಿಸಬೇಕು.
ಧಾತ್ರಿ ಕಾಯಿಯಲ್ಲಿ (ನೆಲ್ಲಿಕಾಯಿಗಳಲ್ಲಿ)- ಐದು, ಏಳು, ಒಂಭತ್ತು ನೆಲ್ಲಿಕಾಯಿಗೆ ತುಪ್ಪದ ದೀಪ ಹಚ್ಚಿ ಆರತಿ ಬೆಳಿಗ್ಯೆ ಮತ್ತು ಸಂಜೆ ಮಾಡತಕ್ಕದ್ದು.
ನಿತ್ಯವೂ ಮನೆಯ ಹೊರಗಿನಿಂದಲೇ ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ, ಮನೆ ಮಂದಿಗೆ ನೆಮ್ಮದಿಯನ್ನು ನೀಡುವ ತಾಯಿ ತುಳಸಿ ದೇವಿ. ಶಕ್ತಿಯನ್ನು ಮತ್ತು ಪವಿತ್ರತೆಯನ್ನು ಸಂಕೇತಿಸುವ ತುಳಸಿ ದೇವಿ ಮನೆಗೆ ಸಮೃದ್ಧಿಯನ್ನು ತರುವ ತಾಯಿ. ಈ ತಾಯಿ ಭಗವಾನ್ ವಿಷ್ಣುವನ್ನು ವಿವಾಹವಾದ ದಿನವನ್ನು ತುಳಸಿ ಅಯನ ಎಂದು ಆಚರಿಸಲಾಗುವುದು. ಆ ಸುದಿನದ ಸಂಕೇತವಾಗಿ ಭಕ್ತರು ಪ್ರತಿವರ್ಷ ಅತ್ಯಂತ ಶ್ರದ್ಧಾ ಭಕ್ತಿಯಿಂದ ತುಳಸಿ ವಿವಾಹದ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬಕ್ಕೆ ತುಳಸಿ ಅಯನ, ತುಳಸಿ ಹಬ್ಬ ಅಥವಾ ತುಳಸಿ ವಿವಾಹ, ತುಳಸಿ ಮದುವೆ ಎಂದು ಕರೆಯುವರು.
ಪರಿಕ್ರಮ ಮಾಡುವಾಗ ತುಳಸಿಗೆ ಹೇಳುವ ಮಂತ್ರ
1. “ಯಾನಿಕಾನಿಚಾ ಪಾಪನಿ ಬ್ರಹ್ಮ ಹತ್ಯ ಅದಿಕಾನಿಚಾ ತಾತ್ಸರ್ವಂ ವಿಲಾಯಂ ಯತಿ ತುಳಸಿ ತ್ವತ್ ಪ್ರದಕ್ಷಿನಾಥ್.”
2. ತುಳಸಿ ಪ್ರಾಣಂ ಮಂತ್ರ “ಮಹಾಪ್ರಸಾದ್ ಜನನಿ ಸರ್ವಸೌಭವ್ಯ ವರ್ಧಿನಿ ಅಧಿವಾಧಿ ಹರೀ ನಿತ್ಯಂ ತುಳಸಿ ತ್ವಾಮ್ ಸಮೋಸ್ತುತೇ.”
3. ತುಳಸಿ ದಳವನ್ನು ಕೀಳುವಾಗ ಅಥವಾ ಕೊಯ್ಯುವಾಗ ಹೇಳುವ ಮಂತ್ರ. ” ಕೃಷ್ಣ ವಾಸುದೇವಾಯ ದೇವಕಿ ನಂದನಾಯಚ ನಂದಗೋಪ್ ಕುಮಾರಾಯ ಗೋವಿಂದಾಯ ನಮೋ ನಮಃ.”
You can download the Tulasi Pooja Vidhanam Kannada PDF using the link given below.