Vat Savitri Vrat Katha Kannada - Summary
ವಟ ಸಾವಿತ್ರಿ ವ್ರತವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮೊದಲನೇಯದು ವೈಶಾಖ ಅಮಾವಾಸ್ಯೆಯಂದು ಬರುತ್ತದೆ. ಎರಡನೇಯದು ಜ್ಯೇಷ್ಠ ಪೂರ್ಣಿಮಾದಂದು ಬರುತ್ತದೆ. ಎರಡೂ ವ್ರತಗಳನ್ನು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆಯಾದರೂ ಆಚರಿಸುವ ವಿಧಾನ, ಮಹತ್ವ ಮತ್ತು ನಿಯಮಗಳು ಒಂದೇ ಆಗಿರುತ್ತದೆ. ಈ ದಿನ, ಸೂರ್ಯೋದಯದಿಂದ, ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸವನ್ನು ಆಚರಿಸುವ ಮೂಲಕ ಆಲದ ಮರವನ್ನು ಪೂಜಿಸುತ್ತಾರೆ.
ಈ ವರ್ಷದ ವಟ ಸಾವಿತ್ರಿ ವ್ರತವನ್ನು ಜೂನ್ 3 ರಂದು ಶನಿವಾರ ಆಚರಿಸಲಾಗುವುದು. ವಟ ಸಾವಿತ್ರಿ ವ್ರತವನ್ನು ಆಚರಿಸುವುದರಿಂದ ಮಹಿಳೆಯರು ಸೌಭಾಗ್ಯಯುತರಾಗಿ ಬಾಳುತ್ತಾರೆ ಎನ್ನುವ ನಂಬಿಕೆಯಿದೆ. ಈ ವರ್ಷ ವಟ ಸಾವಿತ್ರಿ ವ್ರತದಂದು ಶುಭ ಯೋಗಗಳು ರೂಪುಗೊಳ್ಳುವುದರಿಂದ ವ್ರತದ ಫಲ ದ್ವಿಗುಣವಾಗಿರುತ್ತದೆ. ವಟ ಸಾವಿತ್ರಿ 2023 ರ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ಮಂತ್ರಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ವಟ ಸಾವಿತ್ರಿ ವ್ರತ ನಿಯಮ:
- ಈ ದಿನ, ವಿವಾಹಿತ ಮಹಿಳೆಯರು ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ಧರಿಸಬಾರದು.
- ಆಲದ ಮರದ ಕೊಂಬೆಯನ್ನು ಮುರಿಯಬಾರದು. ಒಂದು ವೇಳೆ ಮುರಿದರೆ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವಿರಿ.
- ಪ್ರದಕ್ಷಿಣೆಯ ಸಮಯದಲ್ಲಿ ಯಾರ ಪಾದವೂ ಯಾರಿಗೂ ತಾಗದ ರೀತಿಯಲ್ಲಿ ಆಲದ ಮರವನ್ನು ಸುತ್ತಿ.
- ಈ ದಿನ ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವುದನ್ನು ತಪ್ಪಿಸಿ ಮತ್ತು ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ.
ವಟ ಸಾವಿತ್ರಿ ಪೂಜೆ ವಿಧಾನ
- ಆಲದ ಮರದ ಕೆಳಗೆ ಸಾವಿತ್ರಿ, ಸತ್ಯವಾನ ಮತ್ತು ಯಮನ ಜೇಡಿಮಣ್ಣಿನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಬೇಕು.
- ನಂತರ ಆಲದ ಮರಕ್ಕೆ ನೀರನ್ನು ಅರ್ಪಿಸಬೇಕು.
- ಆಲದ ಮರದ ಪೂಜೆಗೆ ನೀರು, ಮೋಲಿ ದಾರ, ಕುಂಕುಮ, ಹಸಿ ಹತ್ತಿ, ನೆನೆಸಿದ ಬೇಳೆ, ಹೂವುಗಳು ಮತ್ತು ಧೂಪವನ್ನು ಇರಿಸಿ.
- ಆಲದ ಮರಕ್ಕೆ ನೀರನ್ನು ನೀಡಿ, ಮರಕ್ಕೆ ಹತ್ತಿಯ ನೂಲನ್ನು ಸುತ್ತಿ ಮೂರು ಬಾರಿ ಪ್ರದಕ್ಷಿಣೆ ಹಾಕಿ.
- ಇದಾದ ನಂತರ ಸತ್ಯವಾನ್ ಸಾವಿತ್ರಿಯ ಕಥೆಯನ್ನು ಕೇಳಬಹುದು ಅಥವಾ ಓದಬಹುದು.
- ವ್ರತ ಕಥೆಯನ್ನು ಕೇಳಿದ ನಂತರ ಬೇಳೆ ಮತ್ತು ಬೆಲ್ಲವನ್ನು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣವನ್ನು ಇಟ್ಟು ಅದನ್ನು ನಿಮ್ಮ ಅತ್ತೆ ಅಥವಾ ಅತ್ತೆಯಂತಹ ಹಿರಿಯ ಮಹಿಳೆಗೆ ನೀಡಿ ಆಕೆಯಿಂದ ಆಶೀರ್ವಾದವನ್ನು ಪಡೆದುಕೊಳ್ಳಿ.
ವಟ ಸಾವಿತ್ರಿ ವ್ರತ ಕಥೆ (Vat Savitri Vrat Katha in Kannada)
ಪ್ರಾಚೀನ ಕಾಲದಲ್ಲಿ ಮದ್ರಾ ರಾಜನಾದ ಅಶ್ವಪತಿಯು ಸಾವಿತ್ರಿ ದೇವಿಯ ಪೂಜೆಯಿಂದ ಹೆಣ್ಣು ಮಗುವನ್ನು ಪಡೆದುಕೊಳ್ಳುತ್ತಾನೆ. ಸಾವಿತ್ರಿ ದೇವಿಯ ಕೃಪೆಯಿಂದ ಹುಟ್ಟಿದ ಮಗುವಾದ್ದರಿಂದ ರಾಜನು ಆ ಮಗುವಿಗೆ ಸಾವಿತ್ರಿ ಎಂದು ನಾಮಕರಣ ಮಾಡುತ್ತಾನೆ. ಸಾವಿತ್ರಿ ಚಿಕ್ಕವಳಿದ್ದಾಗಲೇ ಒಂದು ದಿನ ಅಶ್ವಪತಿಯು ತನ್ನ ಮಂತ್ರಿಗಳಲ್ಲಿ ಮಗಳಿಗೊಂದು ವರನನ್ನು ಹುಡುಕಿ ತರುವಂತೆ ಆದೇಶಿಸುತ್ತಾನೆ. ಆ ಸಂದರ್ಭದಲ್ಲಿ ಸಾವಿತ್ರಿಯು ಸತ್ಯವಾನ್‌ನ್ನೇ ವರನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆಗ ನಾರದ ಮಹರ್ಷಿಗಳು ಈತನನ್ನು ಮದುವೆಯಾದರೆ ಕೇವಲ 12 ವರ್ಷಗಳ ನಂತರ ಈತ ಮರಣ ಹೊಂದುತ್ತಾನೆಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಸತ್ಯವಾನ್ ತನ್ನ ಮಗಳಿಗೆ ಬೇರೊಂದು ವರನನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತಾನೆ. ಆದರೆ ಸಾವಿತ್ರಿ ತಂದೆಯ ಮಾತನ್ನು ನಿರಾಕರಿಸಿ ಸತ್ಯವಾನ್ ನ್ನೇ ವಿವಾಹವಾಗಿ ತನ್ನ ಪತಿ ಮತ್ತು ಅತ್ತೆಯೊಂದಿಗೆ ಕಾಡಿನಲ್ಲೇ ವಾಸಿಸಲು ಪ್ರಾರಂಭಿಸಿದಳು.
ನಾರದರಿಂದ ಸತ್ಯವಾನ್ ನ ಸಾವಿನ ವಿಷಯ ತಿಳಿದಾಗಿನಿಂದ ಸಾವಿತ್ರಿಯು ಉಪವಾಸ ವ್ರತವನ್ನು ಆಚರಿಸುತ್ತಲೇ ಬರುತ್ತಾಳೆ. ತನ್ನ ಪತಿ ಸತ್ಯವಾನ್ ನ್ನು ಯಮರಾಜ ಕರೆದುಕೊಂಡು ಹೋಗಲು ಬಂದಾಗಲೇ ಸಾವಿತ್ರಿ ಕೂಡ ಯಮನನ್ನು ಹಿಂಬಾಲಿಸಿಕೊಂಡೇ ಹೋಗಿದ್ದಳು. ಆಕೆಯ ಪತಿ ಧರ್ಮವನ್ನು ಮೆಚ್ಚಿದ ಯಮನು ಆಕೆಯಲ್ಲಿ ನಿನಗೆ ಯಾವ ವರಬೇಕು ಕೇಳಿಕೋ ಎನ್ನುತ್ತಾನೆ. ಆಗ ಸಾವಿತ್ರಿಯು ಮೊದಲು ತನ್ನ ಅತ್ತೆಗೆ ಕಣ್ಣುಗಳನ್ನು ಕರುಣಿಸು ತದನಂತರ ತನ್ನ ಗಂಡನಿಗೆ ದೀರ್ಘಾಯುಷ್ಯವನ್ನು ನೀಡೆಂದು ಕೇಳಿಕೊಳ್ಳುತ್ತಾಳೆ. ಆಗ ಯಮನು ಆಕೆಗೆ ಸತ್ಯವಾನ್‌ನ ಪ್ರಾಣವನ್ನು ಕಡಲೆಕಾಯಿ ರೂಪದಲ್ಲಿ ಹಿಂದಿರುಗಿಸುತ್ತಾನೆ.
You can download the Vat Savitri Vrat Katha in Kannada PDF using the link given below.