Kannada Proverbs - Summary
Hello, friends! Today we have brought you the Kannada Proverbs PDF to help you understand these valuable sayings. In this article, you can easily download the Kannada Proverbs in PDF format, and you will also gain complete information regarding the Kannada Proverb.
Discover the Meaning Behind Kannada Proverbs
A translation tells you the meaning of words in another language. A transliteration doesn’t explain the meanings but helps you pronounce them. So, the collection below has both Kannada proverbs along with their English meanings.
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ – Kannada Proverbs
- ತಾಳಿದವನು ಬಾಳಿಯಾನು / ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?
ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
ಇದು ಒಂದು ಜನಪ್ರಿಯ ಗಾದೆ ಮಾತನಾಡಿದ್ದು, ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
ಕೋಪಂ ಅನರ್ಥ ಸಾಧನಂ ಎಂಬ ಮಾತಿನಂತೆ ಕೋಪವು ಕೆಡುಕನ್ನು ಉಂಟುಮಾಡುತ್ತದೆ. ಕ್ಷಣಕಾಲ ಕೋಪದ ಕೈಗೆ ಬುದ್ದಿ ಕೊಟ್ಟರೆ ಅದು ನಮ್ಮನ್ನು ಮಾತ್ರವಲ್ಲದೆ ಅದಕ್ಕೆ ಗುರಿಯಾದವರನ್ನೂ ಅಪಾಯಕ್ಕೆ ನೂಕುತ್ತದೆ.
‘ಒಬ್ಬ ವ್ಯಕ್ತಿಯನ್ನು ನಾಶ ಪಡಸಬೇಕೆಂದರೆ ಆತನು ಕೋಪಗೊಳ್ಳಿವಂತೆ ಮಾಡಬೇಕು’ ಎಂಬ ಮಾತಿದೆ.
ಕುಂಬಾರನು ಹಲವು ದಿನಗಳು ಶ್ರಮ ಪಟ್ಟು ತಯಾರಿಸಿದ ಮಡಕೆಯನ್ನು ಒಂದು ದೊಣ್ಣೆಯಿಂದ ನಾಶ ಮಾಡಿದಂತ, ಕ್ಷಣಿಕ ಕೋಪವು ಅನುಭವವನ್ನು ಉಂಟುಮಾಡುತ್ತದೆ.
ಆದರೆ ಅದನ್ನು ಸರಿಪಡಿಸಲಾಗುತ್ತದೆಯೇ? ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದ ನಂತರ ಚಿಂತನ ಮಾಡಿದರೆ ಮತ್ತೆ ಸರಿಯದೆಯೇ? ಆದ್ದರಿಂದ ‘ತಾಳ್ಮೆಯಿಂದ ಆಲೋಚಿಸಿ, ಕೋಪವನ್ನು ಹಿಂದಿಕ್ಕಿ ಮುನ್ನಡೆದವರೇ ಜೀವನದಲ್ಲಿ ವಿಜಯಶಾಲಿಗಳಾಗಲು ಸಾಧ್ಯ.’ ಎಂಬುದು ಈ ಗಾದೆಯ ಆಶಯವಾಗಿದೆ.
- ಹಾಸಿಗೆ ಇದ್ದಷ್ಟು ಕಾಲು ಚಾಚು / ಅತಿ ಆಸೆ ಗತಿ ಕೆಡಿಸಿತು
ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ. ಇದು ಒಂದು ಜನಪ್ರಿಯ ಗಾದೆ ಮಾತನಾಡಿದ್ದು, ನಮ್ಮ ಆಸೆಗಳಿಗೆ ಇತಿ-ಮಿತಿಯಿರಬೇಕು ಎಂಬುದನ್ನು ತಿಳಿಸುತ್ತದೆ. ”ಆಸೆಯೇ ದುಃಖಕ್ಕೆ ಕಾರಣ’ ಎಂದು ಬುದ್ಧ ಹೇಳಿದ್ದಾನೆ.
ಈಗ ಜೀವನದಲ್ಲಿ ಆನೆಯೇ ಇರಬಾರದೆಂದಲ್ಲ ಆದರೆ ಅದು ಅತಿಯಾಗದೆ ಮಿತಿಯಾಗಿರಬೇಕು, ಅರಮನೆಯ ಸುಖಕ್ಕಿಂತ ನಮ್ಮಲ್ಲಿ ಲಭ್ಯವಿರುವಷ್ಟರಲ್ಲಿ ಬದುಕುವುದರಲ್ಲಿ ನೆಮ್ಮದಿ. ಇದು.
ಆಸೆಗಳು ಅತಿಯಾಗಿ ಆದಾಯ ಕಡಿಮೆ ಇದ್ದಾಗ ಸಾಲ ಮಾಡಬೇಕಾಗುತ್ತದೆ. ಆದ್ದರಿಂದ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಉಚಿತವಾಗಿ ಸಿಗುತ್ತದೆ ಎಂದು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಣೆ ಮಾಡಲು ಪ್ರಯತ್ನಿಸಬಾರದು. ಹಾಗ ಮಾಡಿದರೆ, ‘ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕುಯ್ದು ಹಾಕಿದ ಮೂರ್ಖನ ಕಥೆಯಂತೆ’ ಅತಿಯಾಸೆಯಿಂದಾಗಿ ಇದ್ದದ್ದನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಇಂದೆ ಈ ಗಾದೆಯ ಆಶಯವಾಗಿದೆ. ಬಸವಣ್ಣನವರು ಹೇಳಿರುವಂತೆ ‘ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತ, ಸ್ಪಟಿಕದ ಶಲಾಕೆಯಂತೆ’ ಇರಬೇಕು, ಅಂದರೆ ನಮ್ಮ ಮಾತು ಇತರರಿಗೆ ನೋವುಂಟು ಮಾಡದಂತೆ ಹಿತ-ಮಿತ-ಮೃದುವಾಗಿರಬೇಕು. ಇಲ್ಲದಿದ್ದರೆ, ಅದು ಅನಾಹುತಕ್ಕೂ ಕಾರಣವಾಗುತ್ತದೆ, ಎಂಬುದು ಈ ಗಾದೆಯ ಆಶಯವಾಗಿದೆ.
- ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು / 5. ಕೆಸರಾದರೆ ಬಾಯಿ ಮೊಸರು | ದುಡಿಮೆಯೇ ದುಡ್ಡಿನ ತಾಯಿ
ಗಾದೆಗಳು ವೇದಗಳ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ. ಇದು ಒಂದು ಜನಪ್ರಿಯ ಗಾದೆ ಮಾತನಾಡಿದ್ದು, ದುಡಿಮೆ ಅಥವಾ ದೈಹಿಕ ಶ್ರಮ ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತದೆ.
You can download the Kannada Proverbs PDF using the link given below.