Duryodhana Vilapa Notes Kannada
Duryodhana Vilapa Notes PDF in Kannada read online or download for free from the official website link given at the bottom of this article.
ದಾನವಚಿಂತಾಮಣಿ” ಬಿರುದಾಂಕಿತ ಅತ್ತಿಮಬ್ಬೆಯ ಪ್ರೋತ್ಸಾಹ ದೊರಕಿತು. ಅಜಿತಸೇನಾಚಾರ್ಯರಿಂದ ವಿದ್ಯೆ ಸಂಪಾದಿಸಿದನು . ಮೊದಲು ಗಂಗರ ಮಂತ್ರಿ ಚಾವುಂಡರಾಯನ ಆಶ್ರಯ ಪಡೆಯುತ್ತಾನೆ . ಗಂಗರ ಪತನಾನಂತರ ಚಾಲುಕ್ಯದೊರೆ ತೈಲಪ ಹಾಗೂ ಸತ್ಯಾಶ್ರಯ ಇವಬೆಡಂಗ ( ಬದ್ದೆಗನ ಆಸ್ಥಾನ ಕವಿಯಾಗಿದ್ದನು .
ಅಜಿತ ತೀರ್ಥಂಕರ ಪುರಾಣ ‘ ಮತ್ತು ‘ ಸಾಹಸಭೀಮವಿಜಯಂ ‘ ಇವನ ಉಪಲಬ್ದ ಕಾವ್ಯಗಳು , ಚಂಪೂ ಶೈಲಿಯ ಕೃತಿಗಳಲ್ಲೊಂದಾದ ‘ ಸಾಹಸಭೀಮ ವಿಜಯಂ’ನಲ್ಲಿ ರನ್ನನು , ಪಂಪ ಕವಿಯು ಅರಿಕೇಸರಿಯನ್ನು ಸಮೀಕರಿಸಿ ಕಾವ್ಯ ರಚಿಸಿದಂತೆ , ‘ ಸಾಹಸಭೀಮ ‘ ಬಿರುದಾಂಕಿತ ಇವಬೆಡಂಗ ಸತ್ಯಾಶ್ರಯನನ್ನು ಭೀಮನೊಂದಿಗೆ ಸಮೀಕರಿಸಿದ್ದಾನೆ . ಮಹಾಭಾರತದ ಕುರುಕ್ಷೇತ್ರ ಯುದ್ಧದ ದೃಶ್ಯವೇ ಮುಖ್ಯ ಕಥಾವಸ್ತುವಾದರೂ , ಇಡೀ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಲ್ಲಿ ನಿರೂಪಿಸಿದ್ದಾನೆ . ಇವನ ಇಡೀ ಕಾವ್ಯದಲ್ಲಿ ನಾಟಕೀಯ ಶೈಲಿಯನ್ನು ಕಾಣಬಹುದು .
ಮಹಾಭಾರತ ಯುದ್ಧದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಯುದ್ಧಭೂಮಿಯಲ್ಲಿ ಶರಶಯ್ಯೆಯಲ್ಲಿದ್ದ ತಾತ ಭೀಷ್ಮನನ್ನು ಭೇಟಿ ಮಾಡಲು ಸಂಜಯನೊಡನೆ ಬರುತ್ತಾನೆ . ಸತ್ತು ಬಿದ್ದಿರುವ ವೈರಿಪಕ್ಷದ ವೀರ ಅಭಿಮನ್ಯುವನ್ನು ಪ್ರಶಂಸಿಸುವ ಅವನ ಮನೋಧರ್ಮ ಮೆಚ್ಚತಕ್ಕದ್ದಾಗಿದೆ . ಗುರು ದ್ರೋಣ , ತಮ್ಮ ದುಶ್ಯಾಸನ , ಮಗ ಲಕ್ಷಣಕುಮಾರ ಮತ್ತು ಪ್ರಾಣ ಸ್ನೇಹಿತ ಕರ್ಣರ ಕಳೇಬರಗಳನ್ನು ಕಂಡು ದುರ್ಯೊಧನ ಪಡುವ ದುಃಖ ದುಮಾನ ಹಾಗೂ ಪ್ರಲಾಪಗಳು ಪ್ರಸ್ತುತ ಕಾವ್ಯ ಭಾಗದಲ್ಲಿ ಕರುಳು ಮಿಡಿಯುವಂತೆ ಚಿತ್ರಿತವಾಗಿವೆ .
Duryodhana Vilapa Notes Quotion answer in Kannada
I. ಒಂದು ವಾಕ್ಯದಲ್ಲಿ ಉತ್ತರಿಸಿ .
1. ರಣರಂಗದಲ್ಲಿ ಸಾಗುವಾಗ ದುರ್ಯೋಧನ ಯಾರ ನೆರವನ್ನು ಅವಲಂಬಿಸಿದ್ದನು ?
Ans: ರಣರಂಗದಲ್ಲಿ ಸಾಗುವಾಗ ದುರ್ಯೋಧನನು ಸಂಜಯನ ನೆರವನ್ನು ಅವಲಂಬಿಸಿದ್ದನು .
2. ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು ?
Ans: ಕುರುಪತಿ ರಣರಂಗದಲ್ಲಿ ( ಬಾರಿಗಾತ್ರದ ) ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿದ್ದನು .
3. ಪಿನಾಕ ಪಾಣಿ ಎಂದರೆ ಯಾರು ?
Ans: ಪಿನಾಕ ಎಂಬ ದನಸ್ಸನ್ನು ಹಿಡಿದಿರುವ “ ಶಿವ ”
4. ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು ?
Ans: ತಂದೆಗೆ ಜಲಾಂಜಲಿಯನ್ನು ಮಗನು ಕೊಡಬೇಕು .
5. ಚಕ್ರವ್ಯೂಹವನ್ನು ರಚಿಸಿದವರು ಯಾರು ?
Ans: ಚಕ್ರವ್ಯೂಹವನ್ನು ರಚಿಸಿದವರು ದ್ರೋಣಾಚಾರ್ಯರು .
6. ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ ?
Ans: ದಿವ್ಯಜ್ಞಾನಿ ಎಂದು ಸಹದೇವನನ್ನು ಕರೆಯಲಾಗಿದೆ .
7. ಹರಿಯು ಕರ್ಣನಿಂದ ಬೇಡಿದೇನು ?
Ans: ಹರಿಯು ಕರ್ಣನಿಂದ ಬೇಡಿದ್ದು ‘ ಕವಚವನ್ನು
8. ಅಂಗಾಧಿಪತಿ ಯಾರು ?
Ans: ಅಂಗಾಧಿಪತಿ ಕರ್ಣ
You can download the Duryodhana Vilapa Notes in Kannada PDF using the link given below.
