16 Somavara Vratham Book Telugu PDF

❴SHARE THIS PDF❵ FacebookX (Twitter)Whatsapp
REPORT THIS PDF ⚐

16 Somavara Vratham Book Telugu

ఆషాడ మాసపు శుక్లపక్షం నుంచి కార్తీక మాసంలోని శుక్లపక్షం వరకు వచ్చే పదహారు సోమవారాలూ ఈ వ్రతాన్ని ఆచరించాలి. ముఖ్యముగా కన్యలు ముత్తైదువలు ఈ వ్రతాన్ని ఆచరించినచో శీఘ్రముగా ఫలప్రాప్తి సిద్ధిస్తుంది.
ಈ ವ್ರತವು ಇಷ್ಟಾರ್ಥಪ್ರದವಾದುದು. ಇದು ಪಾರ್ವತೀ ಪರಮೇಶ್ವರರಿಗೆ ಅತ್ಯಂತ ಇಷ್ಟವಾದದ್ದು. ಈ ವ್ರತವನ್ನು ಎಲ್ಲ ಜನಾಂಗದವರೂ ಆಚರಿಸಬಹುದು. ಈ ವ್ರತವನ್ನು ಸೂತಪುರಾಣಿಕರು ನೈಮಿಷಾರಣ್ಯ ಪುಣ್ಯಸ್ಥಳದಲ್ಲಿ ಲೋಕಹಿತಕ್ಕಾಗಿ ಶೌನಕಾದಿ ಮಹರ್ಷಿಗಳಿಗೆ ತಿಳಿಸಿದರೆಂದು ಉಲ್ಲೇಖಿತವಾಗಿದೆ. ಆಷಾಢ ಶುಕ್ಲಪಕ್ಷದಿಂದ – ಕಾರ್ತಿಕ ಶುಕ್ಲ ಪಕ್ಷದ ವರೆಗಿನ ಹದಿನಾರು ಸೋಮವಾರಗಳು (ನಾಲ್ಕು ತಿಂಗಳು) ಈ ವ್ರತವನ್ನು ಆಚರಿಸಬೇಕು.

16 Somavara Vratham Book (ಸಲಹೆ – ಸೂಚನೆಗಳು)

ವ್ರತವನ್ನು ಆಚರಿಸುವವರು (ಸ್ತ್ರೀ-ಪುರುಷರು-ಯಾರೇ ಆಗಲಿ) ಕೆಲವು ನಿಯಮಗಳನ್ನು ಶ್ರದ್ಧೆಯಿಂದ ಪಾಲಿಸಬೇಕು.

  1. ವ್ರತವನ್ನು ಆಚರಿಸುವ ಸೋಮವಾರದ೦ದು ಅಭ್ಯ೦ಜನ ಸ್ನಾನ ಮಾಡಿ ಸಾಯಂಕಾಲ – ಅಂದರೆ ವ್ರತ ಪೂಜೆ. ಮುಗಿಯುವವರೆಗೆ ಉಪವಾಸ ಇರಬೇಕು. ಸಾಧ್ಯ ಆಗದಿದ್ದಲ್ಲಿ
  2. ವ್ರತದ ಆಚರಣೆಯ ದಿನ ಬೆಳಿಗ್ಗೆ ಸ್ನಾನಮಾಡಿ ಉಪವಾಸ ಇದ್ದು ಸಂಜೆ ಸೂರ ಮುಳುಗುವ ಸಮಯದಲ್ಲಿ ಮತ್ತೆ ಸ್ನಾನ ಮಾಡಿ ಶುಚಿ ಆಗಬೇಕು. ಹುತ್ತದ ಮಣ್ಣಿನಿಂದ ಪರಮೇಶ್ವರನ ಲಿಂಗವನ್ನು ತಯಾರಿಸಬೇಕು. ಮುಂದೆ ತಿಳಿಸುವ ವಿಧಾನದಿಂದ ಪೂಜಾ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು ಷೋಡಶ ಉಪಚಾರಗಳಿಂದ ವ್ರತವನ್ನು ಸಾಂಗವಾಗಿ ಆಚರಿಸಿ ಕೊನೆಯಲ್ಲಿ ಬ್ರಹ್ಮಾರ್ಪಣೆಯೊಂದಿಗೆ ಶಿವಲಿಂಗವನ್ನು ನೀರಿನಲ್ಲಿ ವಿಸರ್ಜಿಸಬೇಕು.
  3. ವ್ರತಪೂರ್ಣ ಆಚರಿಸಿ ಅಂದರೆ ವಿಸರ್ಜನೆ ನಂತರ ಬ್ರಾಹ್ಮಣನಿಗೆ ಬಾಗಿನವನ್ನು ದಕ್ಷಿಣೆಯೊಂದಿಗೆ ಕೊಟ್ಟು ಆತನಿಂದ ಆಶೀರ್ವಾದ ಪಡೆಯಬೇಕು. ನಂತರ ಕಥಾಶ್ರವಣ ಮಾಡಬೇಕು.
  4. ನೈವೇದ್ಯಕ್ಕಾಗಿ ಹುರಿದ ಗೋದಿ, ತುಪ್ಪ, ಬೆಲ್ಲ, ಏಲಕ್ಕಿ ಇವುಗಳಿ೦ದ ಗುಲಪಾವಟೆ ಉ೦ಡೆಗಳನ್ನು ಮಡಿಯಲ್ಲಿ ಮಾಡಿಟ್ಟುಕೊಳ್ಳಬೇಕು. ಈ ಖಾದ್ಯವನ್ನು ಮೂರು ಭಾಗಮಾಡಿ ನೈವೇದ್ಯ ಮಾಡಬೇಕು. ಕಥಾ ಶ್ರವಣದ ನಂತರ – ಗೋವಿಗೆ ನೀಡಬೇಕು. ಒಂದು ಭಾಗ ಪ್ರಸಾದವನ್ನು ಮನೆಯವರೆಲ್ಲ ಭುಜಿಸಬೇಕು. ವ್ರತ ಮಾಡುವವರು ಆ ದಿನ ಪ್ರಸಾದದ ಹೊರತು ಬೇರೆ ಏನನ್ನೂ ಸೇವಿಬಾರದು. ಶಿವಲಿಂಗವನ್ನು ನದಿ, ಕೆರೆ ಅಥವಾ ಬಾವಿಯಲ್ಲಿ ವಿಸರ್ಜಿಸಬೇಕು.
  5. 16 ಸೋಮವಾರಗಳು ಶ್ರದ್ಧಾಭಕ್ತಿಗಳಿಂದ ವ್ರತವನ್ನು ಶಾಸ್ರೋಕ್ತವಾಗಿ ಯಾವ ನ್ಯೂನತೆ ಮಾಡದೆ ಆಚರಿಸಿದ ನಂತರ ಹದಿನೇಳನೆಯ ಸೋಮವಾರ ಮತ್ತೆ ಈ ವ್ರತವನ್ನು ಎಂದಿನಂತೆ ಆಚರಿಸಿದರೆ ಪ್ರತ ಸಂಪೂರ್ಣ ಆಗುತ್ತದೆ
  6. ವ್ರತದ ಆಚರಣೆ ನಂತರ ಕರ್ತವು ಶಿವಪಂಚಾಕ್ಷರೀ ಮಂತ್ರವನ್ನು 108 ಸಲ ಜಪಿಸಬೇಕು. ಸಾಧ್ಯ ಇದ್ದಲ್ಲಿ 500 ಸಲ, ಅಥವಾ 5000 ಸಲ ಜಪಿಸಿದರೆ ಪುಣ್ಯಪ್ರದವು.
  7. ವ್ರತವನ್ನು ಆಚರಿಸುವವರು ಆ ದಿನ ಮಿತ ಆಹಾರ ಸೇವಿಸಬೇಕು. ಮಾಂಸಭಕ್ಷಣೆ, ಮದ್ಯಪಾನ, ದಾಂಪತ್ಯ ಸುಖ ಇಚ್ಛಿಸಬಾರದು. ಕೆಟ್ಟ ಮಾತುಗಳನ್ನು ಆಡಲೇ ಬಾರದು

You can download the 16 Somavara Vratham Book PDF using the link given below.

2nd Page of 16 Somavara Vratham Book PDF
16 Somavara Vratham Book

16 Somavara Vratham Book PDF Download Free

REPORT THISIf the purchase / download link of 16 Somavara Vratham Book PDF is not working or you feel any other problem with it, please REPORT IT by selecting the appropriate action such as copyright material / promotion content / link is broken etc. If this is a copyright material we will not be providing its PDF or any source for downloading at any cost.

SIMILAR PDF FILES